    ಮೂಲದೊಡನೆ ಪರಿಶೀಲಿಸಿ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ಇಂಗ್ಲಿಷ್ ಛಂದಸ್ಸು

ಇಂಗ್ಲಿಷ್ ಸಾಹಿತ್ಯದಲ್ಲಿನ ಪದ್ಯ ಗದ್ಯಗಳ ಛಂದಸ್ಸಿನ ಸಂಕ್ಷೇಪ ಪರಿಚಯ ಈ ಲೇಖನದಲ್ಲಿದೆ. 
ಆಧುನಿಕ ಇಂಗ್ಲಿಷ್ ಛಂದಸ್ಸಿನ (ಇಂಗ್ಲಿಷ್ ಪ್ರೊಸೊಡಿ) ಸ್ಥಾಪಕರಲ್ಲಿ ಒಬ್ಬನಾದ ಕ್ರಿಸ್ಟೊಫರ್ ಮಾರ್ಲೂನ ಪ್ರಥಮ ರೂಪಕದ ಪ್ರಥಮ ಪಂಕ್ತಿ ಅಥವಾ ಪಾದ ಹೀಗಿದೆ : ಫ್ರೆಂ ಜಿಗ್ಗಿಂಗ್ ವೇನ್ಸ್ ಆಫ್ ರೈಮಿಂಗ್ ಮದರ್ ವಿಟ್ಸ್. ಭಾಷೆಗೆ ಮೂಲಭೂತವಾದ ಘಟಕಾಂಶ ಅಕ್ಷರಕ್ಕಿಂತಲೂ ಹೆಚ್ಚಾಗಿ ಉಚ್ಚಾರಾಂಶ (ಸಿಲಬಲ್); ಉಚ್ಚಾರಾಂಶಗಳನ್ನು ಅನುಸರಿಸಿ ಹೇಳಿದರೆ ಮೇಲಣ ಪಂಕ್ತಿ ಹೀಗಾಗುತ್ತದೆ. ಪ್ರಮ್ ಜಿಗ್-ಇಂಗ್ ವೇನ್ಸ್ ಆಫ್ ರೈಮ್-ಇಂಗ್ ಮದ್-ಅರ್ ವಿಟ್ಸ್. ಹತ್ತು ಉಚ್ಚಾರಾಂಶಗಳಿಂದ ರೂಪಿತವಾಗಿದೆ ಈ ಪಂಕ್ತಿ. ಇವುಗಳಲ್ಲಿ ಐದರ ಮೇಲೆ ಭಾರ ಅಥವಾ ಒತ್ತು (ಸ್ಟ್ರೆಸ್) ಉಂಟು; ಮಿಕ್ಕ ಐದರ ಮೇಲೆ ಒತ್ತು ಬಲು ಕಡಿಮೆಯಾದ್ದರಿಂದ ಒತ್ತು ಇಲ್ಲವೆಂದೇ ಛಂದಶಾಸ್ತ್ರದ ನಿರ್ಧಾರ. ಒತ್ತು ಕೂಡಿಕೊಂಡ ಮತ್ತು ಒತ್ತಿಲ್ಲದ ಉಚ್ಚಾರಾಂಶಗಳೇ (ಸ್ಟ್ರಸ್ಡ್ ಮತ್ತು ಅನ್ಸ್ಟ್ರಸ್ಡ್ ಸಿಲಬಲ್ಸ್) ಇಂಗ್ಲಿಷ್ ನುಡಿಗಟ್ಟಿಗೆ ಏರಿಳಿತ ಅಥವಾ ಸ್ವರಗತಿಯನ್ನು (ಕ್ಯಾಡೆನ್ಸ್) ತಂದು ಕೊಡುವ ಆಧಾರದ್ರವ್ಯ. ಅವೆರಡರ ಅಂತರವನ್ನು ಸ್ಫುಟವಾಗಿ ಚಿತ್ರಸುವುದಕ್ಕಾಗಿ ಬಳಸುವ ರೇಖಾಚಿಹ್ನೆಗಳು (ಗ್ರ್ಯಾಫಿಕ್ ಸೈನ್ ಅಥವಾ ಸಿಂಬಲ್) ಮೂರು ಬಗೆಯವು : a x, - u, | u. ಕೊನೆಯದಾದ |‰ ವಿಧಾನಕ್ಕೇ ಅಧಿಕ ಪುರಸ್ಕಾರ ದೊರಕಿರುವುದರಿಂದ ಅದನ್ನೇ ಈ ಲೇಖನದಲ್ಲಿ ಇರಿಸಿಕೊಳ್ಳಲಾಗಿದೆ. ಮಾರ್ಲೊನ ಪದ್ಯಪಾದದ ನೈಜ ರೂಪ ಇದು:

	ಫ್ರಮ್‰ ಜಿ†ಗ್-ಇಂ‰ಗ್ ವೇ†ನ್ಸ್-ಆ‰ಫ್ ರೈ†ಮ್-ಇಂಗ್‰ ಮ†ದ್-ಅ‰ರ್ ವಿಟ್ಸ್† ಪದಗಳನ್ನು ಬಿಟ್ಟು ಬರಿ ಸಂಕೇತಗಳನ್ನೇ ಗುರುತಿಸಿದರೆ ಈ ರೇಖಾಕೃತಿ ಹೀಗಾಗುತ್ತದೆ : ‰| ‰| ‰| ‰| ‰|
ಮೊದಲು ಒತ್ತಿಲ್ಲದ ಉಚ್ಚಾರಾಂಶ, ಆಮೇಲೆ ಒತ್ತುಳ್ಳದ್ದು. ಈ ಕ್ರಮದಲ್ಲಿ ನಿಯತವಾಗಿ ಐದು ಬಾರಿ ಅವು ಬಂದಿವೆ. ಎಂದರೆ ಪಾದವನ್ನು ‰| ಮಾದರಿಯ ಐದು ಅಂಗಗಳಾಗಿ ವಿಭಜಿಸಬಹುದು. ಆ ಅಂಗಕ್ಕೆ ಗಣ (ಫುಟ್) ಎಂದು ಹೆಸರು; ಸ್ವರ ಭಾರ ಎರಡನೆಯ ಜಾಗದಲ್ಲಿ ಇರುವುದರಿಂದ ಇಂಥ ಗಣಗಳ ಓಟ ಅಥವಾ ಲಯವನ್ನು (ರಿದಮ್) ಆರೋಹಣಾಲಯ (ರೈಸಿಂಗ್ ರಿದಮ್) ಎನ್ನುತ್ತಾರೆ. ಪ್ರಾಚೀನ ಗ್ರೀಕರ ಪಾರಿಭಾಷಿಕ ಶಬ್ದವಾದ ಅಯಾಂಕ್ ಎಂಬುದನ್ನು ಈ ಇಂಗ್ಲಿಷ್ ಗಣಕ್ಕೂ ಅನ್ವಯಿಸುವುದು ವಾಡಿಕೆ. ನಿಷ್ಠುರದೃಷ್ಟಿಯ ಕೆಲವು ಪಂಡಿತೋತ್ತಮರು ಆ ವಾಡಿಕೆ ಸಲ್ಲದೆಂದು ವಾದಿಸುತ್ತಾರೆ. ಏತಕ್ಕೆಂದರೆ ಗ್ರೀಕ್ ವಾಣಿಯಲ್ಲಿ ಶಬ್ದಾಂಶವನ್ನು ಉಚ್ಚರಿಸುವುದಕ್ಕೆ ತಗಲುವ ಹೊತ್ತು ಮುಖ್ಯವಾಗಿತ್ತೇ ಹೊರತು ಅವಧಾರಣೆಯಲ್ಲ. ಭಾಷೆಗಳ ಮೂಲಪ್ರಕೃತಿಯೇ ಹೀಗೆ ಬೇರೆಯಾಗಿರುವಾಗ ಗ್ರೀಕಿನ ಅಯಾಂಬ್ (‰ |), ಟ್ರೋಕಿ (|‰), ಅನಪೀಸ್ಟ್ (‰‰ |), ಡ್ಯಾಕ್ಟಿಲ್ (|‰‰), ಮುಂತಾದವನ್ನು ಇಂಗ್ಲಿಷಿಗೆ ತರುವುದು ಉಚಿತವಾಗದು. ತೀವ್ರಮತೀಯರಾದ ಕೆಲವು ವಿದ್ವಾಂಸರ ಅಭಿಪ್ರಾಯ ಇದು. ಸಮಸ್ತ ಪಾಶ್ಚಾತ್ಯ ಸಾಂಸ್ಕøತಿಕ ಚಟುವಟಿಕೆಗೂ ಪ್ರಾಚೀನ ಗ್ರೀಕ್ ಸಂಸ್ಕøತಿಯೇ ಅಡಿಪಾಯವಾಗಿರುವುದರಿಂದ ಕಾಲಕ್ಕೆ ಬದಲು ಭಾರವನ್ನು ಇಟ್ಟುಕೊಂಡು ಪ್ರಸಿದ್ಧವೂ ಉಪಯುಕ್ತವೂ ಆದ ಅದೇ ಅಂಕಿತಗಳನ್ನು ಬಳಸುವುದೇ ಸೂಕ್ತ ಮರ್ಯಾದೆಯೆಂದು ಬಹುಮಂದಿ ತಜ್ಞರ ಅಭಿಪ್ರಾಯ. ಮೇಲಣ ಪಂಕ್ತಿಯಲ್ಲಿ ಗಣಗಳು ನೇಮ ತಪ್ಪದೆ ಬಂದು ಪಂಕ್ತಿಯನ್ನು ಛಂದೋಬದ್ಧವಾಗಿಸಿವೆ. ಅದರ ಛಂದಸ್ಸಿಗೆ (ಮೀಟರ್) ಅಯಾಂಬಿಕ್ ಪೆಂಟಮೀಟರ್ ಎಂದು ಹೆಸರು. ಇಂಗ್ಲಿಷಿನ ಪದ್ಯ ಕಾವ್ಯದಲ್ಲಿ 14ನೆಯ ಶತಮಾನದಿಂದ ಇತ್ತೀಚಿನವರೆಗೂ ಮುಕ್ಕಾಲು ಮೂರುವೀಸೆ ಪಾಲೆಲ್ಲ ಇದೇ ಛಂದಸ್ಸು ಕಂಡುಬರುತ್ತದೆ.

	ಇಂಗ್ಲಿಷ್ ಜನತೆಗೆ ಅತ್ಯಂತ ಅಚ್ಚು ಮೆಚ್ಚಾಗಿದ್ದ ಥಾಮಸ್ ಗ್ರೇ ಕವಿಯ ಶೋಕ ಗೀತದ (ಎಲಿಜಿ) ಒಂದು ಚರಣ ಹೀಗಿದೆ :

	ದ‰ ಕ† | ಫ್ರ್ಯು‰ ಟೋ†ಲ್ಸ್ | ದ‰ ನೆಲ್ †| ಆಫ್‰ ಪಾ †| ಟಿಂ‰ಗ್ ಡೇ†
ದ‰ ಲೋ† | ಯಿ‰ಂಗ್ ಹ†ಡ್ರ್ಸ್ | ವೈ†ಂಡ್ ಸ್ಲೋ† | ಲಿ‰ ಓ†ಕ್ | ದ‰ ಲೀ†
ದ‰ ಪ್ಲೋ† | - ಮ‰ನ್ º†Éೂೀಮ್ | -ವ‰ರ್ಡ್ ¥†Á್ಲಡ್ಸ್ |

	ಹಿ‰ಸ್ ವಿ†ಯರ್ |À ಇ‰ ª†Éೀ
ನಾಲ್ಕು ಗಣ, ಮೂರು ಗಣಗಳ ಪದ್ಯ ಸಾಲುಗಳಲ್ಲೂ ಅಯಾಂಬಿಕ್ ಆಧಿಪತ್ಯವೇ ಆಧಿಪತ್ಯ. ಟೆನಿಸನ್ನನ ನುಡಿ ಇದು:
ವೆ‰ನ್ ಗಾ†ಡ್ | ಹ್ಯಾ‰ತ್ ಮೇ†ಡ್ | ಹಿ‰ಸ್ ಪೈ†ಲ್ | ಕ‰ಂ - ಪ್ಲೀ†ಟ್
ವಡ್ರ್ಸವರ್ತ್ ಕವಿಯ ಒಂದು ಕವನ ಭಾಗ ಹೀಗಿದೆ :

	ದ‰ ರೇ†ನ್ | -- ಬೊ‰ ಕಮ್ಸ್† | ಅಂಡ್‰ ಗೋ†ಸ್

	ಬೈ‰ ನೈ†ಟ್ | ಆರ್‰ ಡೇ† |

	ಅಂ‰ಡ್ ಆಲ್† | ದ‰ ಅರ್†್ತ ಈಸ್‰ ಗೇ†
ದೌ‰ ಚೈಲ್ಡ್† | ಆಫ್‰ ಜಾ†ಯ್ |

ಪದ್ಯವಾಗಲಿ ಗದ್ಯವಾಗಲಿ ವಾಕ್ಯವನ್ನು ನುಡಿಯುವಾಗ ಮಧ್ಯೆ ಎಲ್ಲೂ ನಿಲ್ಲದೆ ನುಡಿಯುವುದು ದಿಟವಾಗಿ ಅಸಾಧ್ಯ. ನುಡಿದರೂ ಅದರಿಂದ ಹೇಳುವವನಿಗೂ ಕೇಳುವವನಿಗೂ ಆಯಾಸ. ಇಂಗ್ಲಿಷ್ ಛಂದಸ್ಸಿನಲ್ಲಿ ವಿರಾಮಕ್ಕೆ (ಪಾಸ್ó) ನಿರ್ದಿಷ್ಟವೂ ಸಾಕಷ್ಟೂ ಆದ ಜಾಗವಿದೆ. ಪಾದಾಂತ್ಯ ಒಂದು ನಿಲ್ದಾಣವೆಂಬುದು ಸ್ವಯಂ ವೇದ್ಯ. ಪಾದದ ಮಧ್ಯದಲ್ಲೋ ಮಧ್ಯದ ಸಮೀಪದಲ್ಲೋ ಒಂದು ಬಾರಿ ವಿರಾಮ ಆಗುವುದು ಸಹಜ : ಅದಕ್ಕೆ ಯತಿ (ಸಿಸ್ಯೂರ) ಎಂದು ಹೆಸರು. ಮೊದಲ ಸಾಲಿನಲ್ಲಿ ವೈಕಡ್ಸ್ ಆದ ಕೂಡಲೇ, ಎರಡನೆಯದರಲ್ಲಿ ವರ್ಡ್ ಆದ ಕೂಡಲೆ ಯತಿ ಬೇಕಾಗುತ್ತದೆ. ಎಂದರೆ ಕಡ್ಡಾಯವಾಗಿ ಯತಿ ಬರಲೇಬೇಕೆಂಬ ಕಾಠಿಣ್ಯವಿಲ್ಲ; ಒಂದು ಚರಣದಲ್ಲಿ ಇಷ್ಟೇ ಯತಿ ಇರಬೇಕೆಂಬ ನಿರ್ಬಂಧವೂ ಇಲ್ಲ. ಕಾವ್ಯದ ಪಂಕ್ತಿಯನ್ನು ಓದುಗ ತನ್ನ ಇಚ್ಛೆಯಂತೆ ಒಮ್ಮೆಗೇ ಓದಬಹುದು, ಅಲ್ಲಲ್ಲಿ ತಡೆದು ಓದಬಹುದು, ಭಾವಾರ್ಥಕ್ಕೆ ಭಂಗ ತಾರದಂತೆ, ಮಿಲ್ಟನ್ನನ ಈ ಚರಣ ಕವಿಯ ಪ್ರತಿಭೆ ಬಯಸುವ, ಬಳಸುವ ಸ್ವಾತಂತ್ರ್ಯ ಎಷ್ಟೆಂಬುದಕ್ಕೆ ಉತ್ಕøಷ್ಟ ಸಾಕ್ಷಿ : ರಾಕ್ಸ್, ಕೇವ್ಸ್, ಲೇಕ್ಸ್, ಫೆನ್ಸ್, ಬಾಗ್ಸ್, ಡೆನ್ಸ್ ಅಂಡ್ ಷೇಡ್ಸ್ ಆಫ್ ಡೆತ್. ಇದಷ್ಟೂ ಐದು ಗಣಗಳ ಒಂದು ಚರಣ.

	ಪದ್ಯದ ಗಣಗಳೂ ಸಾಲುಗಳೂ ಗಣಿತದ ನಿಷ್ಠುರ ನಿಯಮವನ್ನು ಅನುಸರಿಸುತ್ತ ಉರುಳಿದರೆ ಬೇಸರದ ಏಕನಾದ (ಸಿಂಗ್ ಸಾಂಗ್) ಉಂಟಾಗಿ ಇಂಪು ಕೆಡುತ್ತದೆ. ಸುಮ್ಮನೆ ಟಿ-ಟಮ್ ಟಿ-ಟಮ್ ಟಿ-ಟಮ್ ಟಿ-ಟಮ್ ಎಂಬ ಸದ್ದಿನ ಪುನರುಕ್ತಿಯನ್ನು ಕೇಳುವುದಕ್ಕಾಗದು. ಇಂಗ್ಲಿಷ್ ಛಂದಸ್ಸು ಯುಕ್ತ ರೀತಿಯ ಲಲಿತ ಛಂದೋಭಂಗಕ್ಕೆ ಅಲ್ಲಲ್ಲಿ ಆಸ್ಪದವೀಯುತ್ತ ಸುಶ್ರಾವ್ಯವಾಗಿದೆ, ರಮ್ಯವಾಗಿದೆ. ಮಾರ್ಲೊನ ಎರಡನೆಯ ಪಂಕ್ತಿ, ಮೂರನೆಯ ಪಂಕ್ತಿ ಹೀಗಿವೆ :

	ಅಂ‰ಡ್ ಸಚ್‰ | ಕ‰ನ್ - ಸೀ†ಟ್ಸ್ | ಅ‰ಸ್ ಕ್ಲೌ†ನ್ | - ಪ್‍ಜ್‰ ಕೀ†ಪ್ಸ | ಇ‰ನ್ ಪೇ†
ವಿ ಲ್ ಲೀ†ಡ್ | ಯು‰ ಟು‰ | ದ‰ ಸ್ಟೇಟ್† | - ಲಿ‰ ಟೆಂಟ್†್ಸ | ಆಫ್‰ | ವಾ†ರ್ (ವಿ ವಿಲ್)
ಇಲ್ಲಿ ಸಚ್ ಎನ್ನುವುದರ ಮೇಲೆ ಭಾರ ನಿಜವಾಗಿ ಇಲ್ಲ; ಸ್ಥಾನದ ಗೌರವದಿಂದ ಅದಕ್ಕೆ ಭಾರ (ಮೆಟ್ರಿಕಲ್ ಆಕ್ಸೆಂಟ್) ದಕ್ಕಿದೆ. ಆದರೆ ಮೂರನೆಯ ಪಂಕ್ತಿಯ ಯು ಟು ಎಂಬುದರಲ್ಲಿ ಎರಡು ಅಂಶಗಳೂ ಒತ್ತಿಲ್ಲದವು : ಅಂಥ ಗಣಕ್ಕೆ ಪಿರ್ರಿಕ್ ಎಂದು ಹೆಸರು. ಎರಡು ಪಂಕ್ತಿಗಳಲ್ಲೂ ನಿಶ್ಚಯವಾಗಿ ಇರುವ ಒತ್ತುಗಳು ನಾಲ್ಕೇ. ಈ ಸಾಲನ್ನು ನೋಡಬಹುದು.

	ದ‰ ಲೊ†ೀ - ಇ‰ಂಗ್ º†Àರ್ಡ್ಸ್ | ವೆ†ೈಂಡ್ ಸ್ಲೊ†ೀ - ಲಿ‰ ಓ† ರ್ ದ‰‰ ಲಿ†ೀ 
ಇಲ್ಲಿ (ಓವರ್) ಮೂರನೆಯ ಗಣ ಎರಡು ಸ್ವರ ಭಾರಗಳಿಂದ ಆಗಿದೆ. ಅದಕ್ಕೆ ಸ್ಪಾಂಡಿ ಎಂದು ಹೆಸರು. ನಾಲ್ಕನೆಯ ಗಣ ಅದಕ್ಕೆ ಪ್ರತಿಯಾಗಿ ಫಿರ್ರಿ ಆಗಿರುವುದರಿಂದ ಅವು ಒಂದಕ್ಕೊಂದು ಈಡಾಗಿ ಸಾಲಿನಲ್ಲಿ ಒಟ್ಟು ಐದೇ ಒತ್ತುಗಳು ಉಳಿಯುವಂತೆ ಮಾಡಿವೆ. ಅಯಾಂಬಿಕ್ ಲಯವನ್ನು ರಚಿಸುವಾಗ ಕವಿ ಇಂಥ ಸಮ ಮೊತ್ತವನ್ನು (ಈಕ್ವಿವಲೆನ್ಸ್) ತಂದಿಡುತ್ತಾನೆಂದು ಪ್ರೊ. ಸೇಂಟ್ಸ್ ಬರಿಯ ಸಿದ್ಧಾಂತ. ಆದರೆ ಎಷ್ಟೋ ಕಡೆ ಸಮತೆ ಸಿದ್ಧಿಸುವುದು ಹೋಗಲಿ, ಅದರ ಸುಳಿವೇ ಕಾಣಿಸುವುದಿಲ್ಲ.

	¯†Áಂಗ್ ¯†Éೈನ್ಸ್ | ಆ‰ಫ್ ಕ್ಲಿ†ಫ್ | ಬ್ರೆ†ೀಕ್-ಇ‰ಂಗ್ | ಹ‰್ಯವ್ ಲೆ¥†sï್ಟ | ಅ† P†Á್ಯಸ್ಮ್ |. ಆರು ಒತ್ತುಗಳಿವೆ ಇದರಲ್ಲಿ. ಒಂದು ಟ್ರೋಕಿಯೂ ಇದೆ. ಮಿಲ್ಟನ್ನನ ಪಂಕ್ತಿಯಲ್ಲಿ ಎಂಟು ಒತ್ತುಗಳು ಘಾತಿಸುತ್ತ್ತಿರುವ ಸತ್ಯಾಂಶವನ್ನು ಮರೆಮಾಚುವುದಕ್ಕೆ ಆಗದು. ಒತ್ತ್ತಿಲ್ಲದ ಉಚ್ಚಾರಾಂಶ ಛಂದಸ್ಸಿನ ಬಲದಿಂದಲೂ ವಚನ ಧೋರಣೆಯ (ರೆಟೊರಿಕಲ್ ಆಕ್ಸೆಂಟ್) ಬಲದಿಂದಲೂ ಸ್ವೀಕರಿಸುತ್ತದೆ. ಅದರ ಸಂಕೇತ ಚಿಹ್ನೆ ಇದು: ಈ ಪಂಕ್ತಿಯನ್ನು ಪರಿಶೀಲಿಸಬಹುದು.

ಫಾ‰ರ್ £†Àನ್ | ಇ‰ಸ್ ª†Àರ್ಸ್ | ದಾ‰್ಯನ್ ಈ‰ಸ್ | ಅ‰ ಫೆ†್ರಂಡ್ | - ಲಿ‰ ¥†sÉೂೀ
ನೀಳ ಕವನಗಳಲ್ಲೂ ನಾಟಕಗಳಲ್ಲೂ ದಶಾಂಶಗಳ ಚರಣ ಕೆಲವು ಸಾರಿ ಒಂಬತ್ತಕ್ಕೆ ಕುಗ್ಗಬಹುದು, ಕೆಲವು ಸಾರಿ ಹನ್ನೊಂದಕ್ಕೆ ಹೆಚ್ಚಬಹುದು. ನಾಲ್ಕೇ ಒತ್ತುಗಳಿರುವ ಸಾಲುಗಳು ಬೇಕಾದಷ್ಟು. ಆರು ಒತ್ತುಗಳು ಆಗಾಗ ಧ್ವನಿಗೈಯುತ್ತವೆ. ಅಯಾಂಬಿನ ಬದಲು ಸ್ಪಾಂಡಿ ಅಥವಾ ಪಿರ್ರಿಕ್ ಬರುವುದು ಸಾಮಾನ್ಯ ವಿದ್ಯಮಾನ; ಅದಕ್ಕೆ ಈಡು (ಸಬ್ಸ್ಟಿಟ್ಯೂಷನ್) ಎಂಬ ಹೆಸರು. ಇಂಗ್ಲಿಷ್ ಛಂದಸ್ಸಿನಲ್ಲಿ ಹೇರಳ ವೈವಿಧ್ಯಕ್ಕೆ ಅವಕಾಶವುಂಟು. ಅಯಾಂಬಿಕ್ ಲಯವೂ ಪ್ರಾಸರಹಿತವಾದ ದಶಾಂಶಗಳ ಪದ್ಯ ಪಂಕ್ತಿಯೂ (ಬ್ಲ್ಯಾಂಕ್ ವರ್ಸ್) ಇಂಗ್ಲಿಷ್‍ಗೆ ವಿಶೇಷ ಒಗ್ಗಿ ಬಂದಿದೆ. ಹೊಸ ಹುಟ್ಟು (ರೆನೈಸಾನ್ಸ್) ಎಂಬ ವಿಪರೀತ ಬದಲಾವಣೆಯ ಪರ್ವಕಾಲದಲ್ಲಿ ಅದು ಜನಿಸಿತು. ಆ ಸಮಯದ ನಾಟಕ ಚಕ್ರ, 17ನೆಯ ಶತಮಾನದ ಚಾರಿತ್ರಿಕ ಕಾವ್ಯ, ಭವ್ಯ ಕಾವ್ಯ, 19ನೆಯ ಶತಮಾನದ ಪದ್ಯ, ಆತ್ಮಕಥೆ. ಅರ್ಧಚಾರಿತ್ರಿಕ ಮತ್ತು ಅರ್ಧಪೌರಾಣಿಕ ದೀರ್ಘ ಕೃತಿ-ಎಲ್ಲಕ್ಕೂ ಅದೇ ಆಧಾರ.

	ಒತ್ತಿಲ್ಲದ ಉಚ್ಚಾರಾಂಶ ಆಗಾಗ ಒತ್ತನ್ನು ಸ್ವೀಕರಿಸುತ್ತದಷ್ಟೆ. ಛಂದಸ್ಸಿಗಾಗಿ ಅದಕ್ಕೆ ಇನ್ನೆರಡು ಬಗೆಯ ವಿಕಾರಗಳೂ ಆಗುವುದುಂಟು. ಈ ಪಂಕ್ತಿಗಳು ಉದಾಹರಣೆ :

	ನೆ‰ೂ ಆಂU†ï| - ಆರ್‰ ¥†sÉೈಂಡ್| ಇ‰ನ್ ದಿ†ೀ| ಬ‰ಟ್ ಪಿ†ಟ್| - (ಇ‰ ಅ‰ಂಡ್) | g†Àುತ್ ಇಲ್ಲಿ ಇ ಅಂಡ್ 
ಎಂಬುವು ಉಚ್ಚಾರಣೆಯಲ್ಲಿ ಕೂಡಿಕೊಳ್ಳುತ್ತವೆ: ಅವು ಎರಡು ಅಂಶಗಳಲ್ಲ. ಒಂದೇ ಅಂಶ. ಈ ಕ್ರಮಕ್ಕೆ ತೇಲಿಸುವಿಕೆ (ಸ್ಲರ್ರ್ರಿಂಗ್) ಎಂದು ಹೆಸರು.

	ಆಫ್‰ ಎ†ಂಗ| - ಅ‰- ಲುಂ†ಡ್| ಟ‰ು ಕೌಂ†ಟ್| ಅ‰ರ್-ಬೆ†ರ್| (ಇ‰ ದೆ‰‰) ª†Éಂಡ,- ಇ ದೇ  ಎಂಬುದೂ ಅದೇ ರೀತಿ ತೇಲಿಕೆಗೆ ಗುರಿಯಾಗುತ್ತದೆ. ಈ ಸಾಲನ್ನು ಆಲಿಸಿ ಕೇಳಬೇಕು.
ಹg†ï್ಲ ಹೆq†ï | - ಲಾ‰ಂಗ್ ಫೆ†್ಲೀಮ್ | ಇಂ‰ಗ್ ಫ್ರ‰ಮ್ | ದ ಎ‰ಥೀ | - ರಿ‰ೀಲ್ ಸ್ಕೈ|

	ಇಲ್ಲಿ ಹರ್ಲೆಡ್ ಎನ್ನುವುದಕ್ಕೆ ಬದಲು ಹರ್ಲ್ಡ್ ಎಂದೂ ದಿ ಎಥೀರೀಲ್ ಎನ್ನುವುದಕ್ಕೆ ಬದಲು ದ ಥಿರೀಲ್ ಎಂದೂ ಉಚ್ಚಾರ ಮಾರ್ಪಟಾಗುತ್ತದೆ; ಎಂದರೆ ಇ (e)ಕಾರ ಅಳಿಸಿಹೋಗುತ್ತದೆ. ಈ ವ್ಯವಹಾರವನ್ನು ಮರೆತ (ಇಲಿಷನ್) ಎನ್ನುತ್ತಾರೆ. 18ನೆಯ ಶತಮಾನದಲ್ಲಿ ತಪ್ಪಿಲ್ಲದ ಕವನ (ಕರೆಕ್ಟ್ ವರ್ಸಿಫಿಕೇಷನ್) ಕವಿಗಳಿಗೆ ಆದರ್ಶವಾಗಿತ್ತು; ಅದನ್ನು ರೂಢಿಸುವ ಆತುರದಲ್ಲಿ ಹಲವು ಬಗೆಯ ವೈಪರೀತ್ಯಗಳೂ ಆಭಾಸಗಳೂ ಆಗುವುದನ್ನು ಅವರು ಲಕ್ಷಿಸಲಿಲ್ಲ.

	ಆ‰ - ಮೆ†ೀ¸óï | (z‰ï ಅನ್)ಲ†ರ್ನ್ಡ್ | ಅಂ‰ಡ್ ಮೇP†ï | z‰À ಲರ್†್ನ | - ಎq‰ï ಸ್ಮೈ†ಲ್ 

ಇಲ್ಲಿ ಮೊದಲು ದಿ ಅನ್‍ಲರ್ನಡ್ ಎಂಬುದರಲ್ಲಿ ಇ ಅನ್ ಇ ಇಷ್ಟೂ ಮಾಯವಾದಂತೆ ತಿಳಿದು, ಕಡೆಯಲ್ಲಿ ದಿ ಲರ್ನೆಡ್ ಎನ್ನುವಾಗ ಎರಡು ಇ ಕಾರಗಳಿಗೂ ಅಸ್ತಿತ್ವ ಬಂದಂತೆ ಒಪ್ಪಿಕೊಳ್ಳತಕ್ಕದ್ದು.!

	ಪ್ರಾಸಯುಕ್ತವಾದ ಕವಿತ್ವವೂ ಇಂಗ್ಲಿಷ್‍ನಲ್ಲಿ ಪುಷ್ಕಳವಾಗಿದೆ, ಕರ್ಣರಸಾಯನವಾಗಿದೆ. ಪ್ರಾಸವೇನೂ (ರ್ಹೈಮ್) ಹೊಸದಲ್ಲ: ಹೊರಚ್ಚಲ್ಲ ಇಂಗ್ಲಿಷಿಗೆ, ಹಳೆಯ ಇಂಗ್ಲಿಷ್ ಮತ್ತು ನಡು ಇಂಗ್ಲಿಷ್ ಎರಡಕ್ಕೂ ಬೇರೆ ಬೇರೆ ಭಾಷೆಗಳೇನೋ ಎಂದು ತೋರುವಷ್ಟು ಅಂತರ. ಅದು ಹಳೆಯ ಸ್ಯಾಕ್ಸನ್, ಹಳೆಯ ಜರ್ಮನ್ ಮೊದಲಾದುವಂತೆ ಒಂದು ಜರ್ಮನಿಕ್ ವಾಕ್ಕು. ಅದರ ಪದ್ಯಪಂಕ್ತಿ ಈ ರೀತಿ ಇತ್ತು :

	ಬೆ ಅ ವುಲ್ಪ್ ವಸ್ ಬ್ರೆಮೆ | ಬ್ಲ್ಯಡ್ ವಿಡೆ ಸ್ಪಂಗ್
-	 -	-
(ಃeoತಿuಟಜಿ ತಿಚಿs bಡಿeme bಟoeeಜ ತಿiಜe sಠಿಡಿಚಿಟಿg)
 	-	 -	 -

ಪ್ರತಿ ಪಂಕ್ತಿಗೂ ಅದನ್ನು ಹೆಚ್ಚು ಕಡಿಮೆ ಅರ್ಥಗೈಯುವ ಎರಡು ಭಾಗಗಳು: ಅವನ್ನು ಕೊಂಡಿ ಕೂಡಿಸುವ ಅಂಶ ಆದ್ಯಕ್ಷರ ಪ್ರಾಸ ಅಥವಾ ವಡಿ (ಅಲಿಟರೇಷನ್). ಪ್ರತಿ ಅರ್ಧದಲ್ಲೂ ಎರಡು ಒತ್ತುಳ್ಳ ಉಚ್ಚಾರಾಂಶ ಇರಲೇಬೇಕು. ಎರಡನೆಯ ಅರ್ಧದ ಮೊದಲ ಒತ್ತುಳ್ಳ ಉಚ್ಚಾರಾಂಶಕ್ಕೆ ಆದಿಪ್ರಾಸವನ್ನು ಹೊರುವ, ಗೊತ್ತು ಮಾಡುವ ಹೊಣೆಗಾರಿಕೆ; ಅದರೊಡನೆ ಮೊದಲ ಅರ್ಧದಲ್ಲಿ ಒಂದಾದರೂ ಒತ್ತುಳ್ಳ ಉಚ್ಚಾರಾಂಶ ಪ್ರಾಸವಾಗತಕ್ಕದ್ದು; ಎರಡನೆಯದೂ ಪ್ರಾಸ ಕೊಡಬಹುದು. ಆದರೆ ಪಾದದ ಕೊನೆಯ ಉಚ್ಚಾರಾಂಶ ಎಂದಿಗೂ ಪ್ರಾಸಕ್ಕೆ ಸೇರಕೂಡದು. ಸ್ವರಗಳೆಲ್ಲ ಒಂದೇ ಪ್ರಾಸಕ್ಕೆ ಸೇರಿದವು ಎಂಬ ನಂಬಿಕೆಯಿತ್ತು. ಸ್ಕ ಸ್ಟ ಸ್ಪ ಮುಂತಾದವನ್ನು ಏಕಾಕ್ಷರಗಳೆಂದೇ ಬಗೆಯುತ್ತಿದ್ದರು; ಅವು ಒಂದಕ್ಕೊಂದು ಪ್ರಾಸವಾಗುವಂತಿರಲಿಲ್ಲ. ಒಂದು ಪಾದದಲ್ಲಿ ಎಷ್ಟು ಬೇಕಾದರೂ ಒತ್ತಲ್ಲದ ಉಚ್ಚಾರಾಂಶಗಳು ಇರಬಹುದಾಗಿತ್ತು; ಅವುಗಳ ಸಂಖ್ಯೆ ಹಳೆಯ ಇಂಗ್ಲಿಷಿನಲ್ಲಿ ಕಡಿಮೆ; ಇತರ ಹಳೆಯ ಜರ್ಮನಿಕ್ ವಾಣಿಗಳಲ್ಲಿ ಅಧಿಕ. ಒತ್ತಿಲ್ಲದ ಉಚ್ಚಾರಾಂಶಗಳ ಪ್ರಥಮಾಕ್ಷರ ಒಂದೇ ಆಗಿದ್ದರೂ ಅದನ್ನು ಪ್ರಾಸವೆಂದು ಪರಿಗಣಿಸುತ್ತಿರಲಿಲ್ಲ :

	ಹೆ ಆನ್ ಹೂ ಸೆóಸ್| ಹು ಹಿಮ್ ಹ್ರಿಂಗ್ - ಡೆನೆ.

-	 -	 -

	ಊeಚಿm huses hu him ಊಡಿiಟಿg — ಆeಟಿe
-	 -	 -

ಇಲ್ಲಿ ಹು ಹಿಮ್ ಪ್ರಾಸಾಕ್ಷರಗಳಲ್ಲ. ಈ ಛಂದಸ್ಸನ್ನು ತೂರಾಡುವ ಪದ್ಯ ಪಂಕ್ತಿ (ಟಂಬ್ಲಿಂಗ್ ವರ್ಸ್) ಎಂದು ಕೆಲವುಕಾಲ ಅಪಹಾಸ್ಯ ಮಾಡುತ್ತ್ತಿದ್ದರು. ಹಳೆಯ ಇಂಗ್ಲಿಷ್‍ನಲ್ಲೂ ಬರಬರುತ್ತ ಅಂತ್ಯ ಪ್ರಾಸ (ರ್ಹೈಮ್) ಎದ್ದು ಬಂದು, ಕವಿವರ್ಗಕ್ಕೆ ಹೆಚ್ಚು ಹೆಚ್ಚು ಪ್ರಿಯವಾದಂತೆ ಕಾಣುತ್ತದೆ, ಅದರಲ್ಲೂ ಸಣ್ಣ ಭಾವಗೀತೆಗಳಲ್ಲಿ.

	14ನೆಯ ಶತಮಾನದಲ್ಲಿ ಇಂಗ್ಲಿಷ್ ಭಾಷೆಯಲ್ಲೂ ಇಂಗ್ಲಿಷ್ ಛಂದಸ್ಸಿನಲ್ಲೂ ಬಹಳs ಬದಲಾವಣೆಯಾಯ್ತು. ಮಹಾಕವಿ ಚಾಸರ್ ತನ್ನ ಪ್ರಬಲ ಪ್ರತಿಭೆಯಿಂದ ದೊಡ್ಡ ಕ್ರಾಂತಿಯನ್ನು ಎಬ್ಬಿಸಿದ. ಅವನ ಪದಕೋಶ ನಡುಇಂಗ್ಲಿಷ್ ಆದರೂ ಕವಿದರ್ಶನದಲ್ಲೂ ಕಾವ್ಯಮಾರ್ಗದಲ್ಲೂ ಛಂದಸ್ಸಿನಲ್ಲೂ ಆಧುನಿಕ ಇಂಗ್ಲಿಷ್ ಕವಿ ಸಂದೇಹಕ್ಕೆ ಅವನೇ ಮೂಲ ಪುರುಷ. ವಿಚಿತ್ರವೆಂದರೆ ಅವನ ಸಮಕಾಲೀನನಾದ ವಿಲಿಯಮ್ ಲ್ಯಾಂಗ್ಲೆಂಡ್ ಅವನಂತೆ ನಡು ಇಂಗ್ಲಿಷ್ ನುಡಿಯನ್ನೇ ಉಪಯೋಗಿಸಿದರೂ ಹಳೆಯ ಇಂಗ್ಲಿಷ್ ಛಂದಸ್ಸಿಗೇ ವಿಧೇಯನಾಗಿ, ಉತ್ತಮ ಕೃತಿಯೊಂದನ್ನು ಕಟ್ಟಿ ಕೀರ್ತವಂತನಾದ. ಉದಾಹರಣೆ :

	ಇನ್ ಅ ಸೊಮರ್ ಸೆó ¸óÉೂ ನ್| ವ್ಹನ್ ಸೋ¥óï್ಟ ವ¸óï ದೆ ಸುನ್ನ

 -	 -	

	ಅಂಡ್ ಅಸ್ ಇ ಲೇ ಅಂಡ್ ಲೆನೆಡ್ 

 -	 -	 -

ಅಂಡ್ ಲುಕೆಡ್ 

ಇನ್ ದೆ ವಾಟೆರಸ್

ಆದರೂ ಚಾಸರನ ಕೈಯೇ ಮೇಲಾಯ್ತು.

ಚಾಸರ್ ಎಸಗಿದ ಮುಖ್ಯ ಮಾರ್ಪಾಟುಗಳು ನಾಲ್ಕು : 1 ಪದ್ಯಪಂಕ್ತಿಯ ಉಚ್ಚಾರಾಂಶಗಳು ಎಂಟನ್ನೋ ಹತ್ತನ್ನೋ ಮೀರದಂತೆ ಸಂಯಮ ಇರಬೇಕು. 2 ಅವು ಕ್ರಮವರಿತ ಗಣಗಳಾಗಿಯೇ ಇರಬೇಕು. 3 ಅಂತ್ಯಪ್ರಾಸ ಅಗತ್ಯ; ಅದನ್ನು ಅನುಷ್ಠಾನಗೈಯುವಾಗ ಎಚ್ಚರಿಕೆಯೂ ಅಗತ್ಯ, ಶಿಸ್ತನ್ನು ಅದು ಅತಿಕ್ರಮಿಸಬಾರದು ಎಂಬ ಸೂತ್ರಗಳನ್ನು ಆತ ಅನುಷ್ಠಾನಕ್ಕೆ ತಂದನಲ್ಲದೆ 4 ದ್ವಿಪದಿ ತ್ರಿಪದಿ ಚೌಪದಿ ಸಪ್ತಪದಿ (ರ್ಹೈಮ್ ರಾಯಲ್) ಅಷ್ಟಪದಿ (ಅಟ್ಟಾವ ರೈಮ) ಇತ್ಯಾದಿ ಇಟಾಲಿಯನ್ ವೃತ್ತಗಳನ್ನು (ಸ್ಟ್ಯಾನ್ಜಾ) ಅತ್ಯಂತ ದಕ್ಷತೆಯಿಂದ ಮನವೊಪ್ಪುವ ಹಾಗೆ ಇಂಗ್ಲಿಷಿಗೆ ಅಳವಡಿಸಿ ಮಹೋಪಕಾರ ಮಾಡಿದ.
ಚಾಸರನನ್ನು ಪಠಿಸುವ ವಿಚಾರದಲ್ಲಿ ನಡೆದ ಒಂದು ಪ್ರಸಂಗ ಬೋಧಪ್ರದವಾಗಿದೆ. ಅವನಾದ ಒಂದೆರಡು ತಲೆಮಾರಿನೊಳಗೆ ಇಂಗ್ಲಿಷ್ ಭಾಷೆಗೆ ಒದಗಿದ ವಿಪರೀತ ಬದಲಾವಣೆಯ ಫಲವಾಗಿ ಅನೇಕ ಶಬ್ದಾಂಶಗಳ ಉಚ್ಚಾರಣೆಯಲ್ಲೂ ಹಲವು ಸ್ವರ ಕೆಲವು ವ್ಯಂಜನಗಳ ಅಸ್ತಿತ್ವ ಮತ್ತು ಸ್ವರೂಪದಲ್ಲೂ ದೊಡ್ಡ ವ್ಯತ್ಯಾಸ ಏರ್ಪಟ್ಟಿತು. ಅದನ್ನು ಅರಿಯದ ಜನ 17, 18ನೆಯ ಶತಮಾನಗಳಲ್ಲಿ ಚಾಸರನ ಕವಿತ್ವ ಅನಿಶ್ಚಿತ ಮತ್ತು ಕರ್ಕಶವೆಂದು ತೀರ್ಮಾನಿಸಿದರು. ಅವನ ವಾಣಿ ಅವರ ಕಿವಿಗೆ ಕೇಳಿ ಬಂದದ್ದು ಹೀಗೆ :

	ವೆನ್ ದ್ಯಟ್ ಏಪ್ರಿಲ್ ವಿತ್ ಹಿಸ್ ಷವರ್ಸ್ ಸೊಟ್

	ಅಂಡ್ ಸ್ಮಾಲ್ ಫೌಲ್ಸ್ ಮೇಕ್ಸ್ ಮೆಲಡಿ.

ಇವುಗಳಿಗೆ ಪ್ರಸ್ತಾರ ಹಾಕುವುದು ಹೇಗೆ ? ಆದರೆ ಆ ಪಂಕ್ತಿಗಳನ್ನು ಚಾಸರನ ಕಾಲದವರು ಪ್ರಾಯಶ: ಹೀಗೆ ಅನ್ನುತ್ತಿದ್ದರು :
			 |
ವ್ಹ‰ನ್ ಡ†ಟ್ | ಆ‰-ಪ್ರೀ†ಲ್ | - ಲ‰ ವಿ‰ ತ್ | ಇಸ್‰ ಷೂ† | - ರೆಸ್‰ ಸ್ವೋ†ಟ
ಅಂ‰ಡ್ ಸ್ಮಾ†ಹ್ | - ಲ‰ ಫೂ† | - ಲೆ‰ಸ್ ಮಾ†ಹ್ | - ಕ‰ನ್ ಮೆಲ್ | -ಒ‰ ಡಿ†ೀ ಅ.

ಹೀಗೆ ಮಾಡಿದಾಗ ಚರಣಗಳು ಛಂದೋಬದ್ಧವಾಗುತ್ತವೆ; ನಾದ ಮಾಧುರ್ಯ ಹೆಚ್ಚುತ್ತದೆ. ನಡು ಇಂಗ್ಲಿಷಿನ ಖಚಿತe್ಞÁನ ಹೆಚ್ಚು ಹೆಚ್ಚಾದಂತೆಲ್ಲ ಇಂಗ್ಲಿಷ್ ಕಾವ್ಯಪದ್ಧತಿಗೆ ಚಾಸರನೇ ತಂದೆಯೆಂಬುದು ಅಂಗೀಕೃತ ಸತ್ಯಾಂಶವಾಯ್ತು.

	ಚಾಸರನ ತರುವಾಯ ಬಂದ ಕವಿಗಳಲ್ಲಿ ತಮ್ಮದೇ ಆದ ನೂತನ ವೃತ್ತಗಳನ್ನು ಕಂಡುಹಿಡಿದು ಪ್ರಶಸ್ತವಾಗಿ ಉಪಯೋಗಿಸಿದವರು ಒಬ್ಬಿಬ್ಬರು ಮಾತ್ರ. 16ನೆಯ ಶತಮಾನದ ಎಡ್ಮಂಡ್ ಸ್ಪೆನ್ಸರ್ ಒಂಬತ್ತು ಸಾಲಿನ ಸಂಕೀರ್ಣ ಪ್ರಾಸದ ವೃತ್ತವನ್ನು ಕೌಶಲದಿಂದ ಉಪಯೋಗಿಸಿದ; ಅದಕ್ಕೆ ಸ್ಪೆನ್ಸರನ ವೃತ್ತವೆಂದೇ ಅಂಕಿತ. ಅದರ ಎಂಟು ಸಾಲುಗಳು ಐದು ಅಯಾಂಬಿಕ್ ಗಣಗಳಿಂದ ಕೂಡಿದವು; ಒಂಬತ್ತನೆಯದಕ್ಕೆ ಇನ್ನೊಂದು ಗಣ ಹೆಚ್ಚು. ಅದರ ಹೆಸರು ಅಲೆಕ್ಜಾಂಡ್ರಿಯನ್. ಅದೇ ಸಮಯದಲ್ಲಿ ವಯಟ್, ಸರ್ರೆ ಎಂಬ ಇಬ್ಬರು, ಇಟಲಿಯಲ್ಲಿ ಹುಟ್ಟಿ ಬಂದಿದ್ದ ಹದಿನಾಲ್ಕು ಪಂಕ್ತಿಯ ಸಾನೆಟ್ ವೃತ್ತವನ್ನು ಇಂಗ್ಲಿಷಿನಲ್ಲಿ ರಚಿಸಿ ಮಾರ್ಗದರ್ಶಕರಾದರು; ಆದರೆ ಪ್ರಾರಂಭದಿಂದಲೂ ಇಂಗ್ಲಿಷ್ ಸಾನೆಟ್ ಎರಡು ಬಗೆಯದ್ದಾಗಿದೆ, ವೃತ್ತದ ಭಾಗಗಳ ವಿಭಜನೆಯಲ್ಲಿ, ಪ್ರಾಸದ ಯೋಜನೆಯಲ್ಲಿ ಸಾನೆಟ್ಟನ್ನು ಆತ ಎತ್ತರದ ಮಟ್ಟಕ್ಕೆ ಏರಿಸಿದವರು ಷೇಕ್ಸ್‍ಪಿಯರ್, ಮಿಲ್ಟನ್, ವಡ್ರ್ಸ್‍ವರ್ತ್. 17, 18ನೆಯ ಶತಮಾನಗಳಲ್ಲಿ ದ್ವಿಪದಿ ಬಹುವಾಗಿ ಬಳಕೆಗೆ ಬಂತು. ಡ್ರೈಡನ್, ಪೋಪ್ ಕವಿಗಳು ಅದಕ್ಕೆ ಸಂಕ್ಷೇಪವನ್ನೂ ಬಿಗಿಯನ್ನೂ ಸತ್ತ್ವವನ್ನೂ ಲಾವಣ್ಯವನ್ನೂ ತಂದುಕೊಟ್ಟುದಲ್ಲದೆ ಅದರ ಮೂಲಕವೇ ಕಾವ್ಯಸಾರ್ಥಕವನ್ನು ಪಡೆದುಕೊಂಡರು.

ದ‰ ಫೋ†ರ್ಸ್ | ಅ‰ಫ್ ನೇ† | - ಚರ್‰ ಕು†ಡ್ | ನೊ‰ ಫಾ†ರ್ | - ದ‰ರ್ ಗೋ;

ಟು‰ ಮೇ†ಕ್ | ಅ‰ ಥ†ರ್ಡ್ | ಷಿ‰ ಜಾಯ†ಂಡ್ | ದ‰ ಫಾ†ರ್ | - ಮ‰ರ್ ಟ್ವೊ.

ದಿ‰ಸ್ ಕ್ಯಾ†ಸ್ | - ಕ‰ಟ್ ಇ†ಂಡ್ | - ಯ‰ಸ್ ಗ್ಲೋ† | - ಇಂಗ್‰ ಜೆ†ಮ್ಸ್ | ಅನ್‰-ಲಾಕ್ಸ್

ಅನ್ಡ್‰ ಆ†ಲ್ | ಅ‰-ರೇ† | - ಬ್ಯ‰ ಬ್ರೀ†ತ್ಸ್ | ಫ್ರ‰ಮ್ ಯಾ†ಂಡ್ | - ಅ‰ರ್‍ಬಾಕ್ಸ್.

ಬರ್ನ್ಸ್ ಕವಿಯ ಆರು ಚರಣಗಳ ವೃತ್ತಕ್ಕೆ ಅವನ ಹೆಸರೇ ಇದೆ. ಟೆನಿಸನ್ ನಾಲ್ಕು ಗಣದ ಒಂದು ಚೌಪದಿಯ ಮೇಲೆ ತನ್ನ ಮುದ್ರೆಯನ್ನು ಒತ್ತ್ತಿದ್ದಾನೆ.

	ಈ ಎಲ್ಲ ವೃತ್ತ ಜಾತಿಗಳಲ್ಲೂ ಅಂತ್ಯ ಪ್ರಾಸದ ನಿಯಂತ್ರಣಕ್ಕೆ ವಿಶೇಷ ಪ್ರಾಧಾನ್ಯ. ಪ್ರಾಸಕ್ರಮವನ್ನು ನಿರೂಪಿಸುವುದಕ್ಕೆ ಇಂಗ್ಲಿಷಿನಲ್ಲಿ ಎ ಬಿ ಸಿ ಡಿ ಇ ಎಫ್ ಜಿ ಅಕ್ಷರಗಳನ್ನು ಸಂಕೇತ ಚಿಹ್ನೆಗಳಾಗಿ ಉಪಯೋಗಿಸುವ ವ್ಯವಸ್ಥೆಯಿದೆ. ದ್ವಿಪದಿಯ ಪ್ರಾಸ ಎ ಎ; ಚೌಪದಿಯ ಪ್ರಾಸ ಸಾಮಾನ್ಯವಾಗಿ ಎ ಬಿ ಎ ಬಿ; ಟೆನಿಸನ್ನನ ಚೌಪದಿಗೆ ಎ ಬಿ ಬಿ ಎ. ಬನ್ರ್ಸ್ ವೃತ್ತದಲ್ಲಿ ಎ ಎ ಎ ಬಿ ಎ ಬಿ. ರೈಮ್ ರಾಯಲಿನಲ್ಲಿ ಎ ಬಿ ಎ ಬಿ ಬಿ ಸಿ ಸಿ. ಸ್ಪೆನ್ಸರನ ವೃತ್ತದ ಕ್ರಮ ಎ ಬಿ ಎ ಬಿ ಬಿ ಸಿ ಬಿ ಸಿ ಸಿ. ಇಟಲಿಯ ಮಾದರಿ ಸಾನೆಟ್ಟಿನ ಪ್ರಾಸಕ್ರಮ ಎ ಬಿ ಬಿ ಎ ಎ ಬಿ ಬಿ ಎ ಸಿ ಡಿ ಇ ಸಿ ಡಿ ಇ; ಇಂಗ್ಲಿಷ್ ಮಾದರಿ ಸಾನೆಟ್ಟಿನ ಕ್ರಮ ಎ ಬಿ ಎ ಬಿ ಸಿ ಡಿ ಸಿ ಡಿ ಇ ಇಫ್ ಇ ಎಫ್ ಜಿ ಜಿ.

	ಅವರೋಹಣ ಗತಿಯ ಛಂದಸ್ಸು ಇಂಗ್ಲಿಷಿನಲ್ಲಿ ವಿರಳ. ಟ್ರೋಕಿ ಗಣದ (|‰) ಕೆಲವು ಗೀತೆಗಳು ಗಮನೀಯವಾಗಿವೆ. ಬ್ಲೇಕ್‍ನ ನೈಪುಣ್ಯ ಪ್ರಶಂಸಾರ್ಹ.
ಪೈ†ಪ್ ಅ‰ | ಸಾಂ‰ಗ್ ಅ‰ | ಬೌ†ಟ್ ಅ‰ | ಲಾ†ಮ್ ಟಿ
ಟೈ†-ಗ‰ರ್, | ಟೈ†-ಗರ್‰ | ಬರ್ನ್†-ಇಂಗ್‰ | ಬ್ರೈಟ್ ಟಿ
(ಈ ಗುರುತು ಟಿ ಕ್ಯರೆಟ್ ಎಂಬ ಅಭಿಧಾನದ್ದು; ಒಂದು ಒತ್ತಿಲ್ಲದ ಉಚ್ಛಾರಾಂಶ ಅಲ್ಲಿ ಹ್ರಸ್ವವಾಗಿದೆ ಎಂದು ಅದರ ಸೂಚನೆ). ಲಾಂಗ್‍ಫೆಲೊ ನಾಲ್ಕು ಗಣದ ಟ್ರೋಕಿ ವಿಧಾನದಲ್ಲಿ ಒಂದು ನೀಳ್ಗವಿತೆಯನ್ನು ಬರೆದ.

	ಮೂರು ಉಚ್ಛಾರಾಂಶಗಳಿಂದಾಗುವ ಗಣಗಳಲ್ಲಿ ಎರಡು ಬಗೆಗೆ ಮಾತ್ರ ಇಂಗ್ಲಿಷಿನಲ್ಲಿ ಪ್ರಾಸವುಂಟು : u u | ಅನಪೀಸ್ಟ್, | u u ಡ್ಯಾಕ್ಟಿಲ್. ಅಯಾಂಬಿಕ್ ಗಣದ ಕವಿತೆಯಲ್ಲಿ ಅನಪೀಸ್ಟೂ ಟ್ರೋಕೇಕ್ ಗಣದ ಕವಿತೆಯಲ್ಲಿ ಡ್ಯಾಕ್ಟಿಲ್ಲೂ ಆಗಾಗ ಬದಲು ಗಣವಾಗಿ ಬರುತ್ತವೆ. ಉದ್ದಕ್ಕೂ ಅವನ್ನೇ ಬಳಸಿಕೊಳ್ಳುವ ಕಾವ್ಯಗಳು ಅಪೂರ್ವ; ಅಂಥವು ಕೇವಲ ಪರೀಕ್ಷಾಪ್ರಯೋಗಗಳು.

	19ನೆಯ ಶತಮಾನದಲ್ಲಿ ಫ್ರಾನ್ಸಿನ ಕವಿಗಳು ಹತ್ತಾರು ವಿಧದ ನವೀನ ಛಂದೋಮಾರ್ಗಗಳನ್ನು ರೂಪಿಸಿದರು; ಅವುಗಳಲ್ಲಿ ಒಂದೆರಡು ಇಂಗ್ಲೆಂಡನ್ನೂ ಹೊಕ್ಕವು. ಯಾವೊಂದು ಗಣದ ಗೋಜಿಗೂ ಹೋಗದೆ, ಉಚ್ಚಾರಾಂಶಗಳ ಸಂಖ್ಯೆಯನ್ನು ಪಾದ ಪಾದಕ್ಕೂ ಭಿನ್ನಗೊಳಿಸುತ್ತ, ಚರಣದ ತೂಕ ಹೆಚ್ಚು ಕಡಿಮೆ ಸಮ ಎಂಬ ರಸಭ್ರಮೆಯನ್ನು ಸೃಜಿಸುತ್ತ, ಕಟ್ಟುವ ಒಂದು ಪದ್ಧತಿ ಪ್ರಸಿದ್ಧ. ಅದನ್ನು ಸ್ವಚ್ಛಂದ ಪದ್ಯಪಂಕ್ತಿ (ಫ್ರೀ ವರ್ಸ್) ಎನ್ನುತ್ತಾರೆ. ಸಂಯುಕ್ತ ಸಂಸ್ಥಾನದ ವಾಲ್ಟ್‍ವಿಟ್ಮನ್ ಅದರಲ್ಲಿ ನಿಷ್ಣಾತ. ಅಲ್ಲಿನ ಕವಿಗಳಿಗೆ ಅದು ಹೊಂದಿ ಬಂದಿರುವಂತೆ ಇಂಗ್ಲೆಂಡಿನ ಕವಿಗಳಿಗೆ ಹೊಂದಿ ಬಂದಿಲ್ಲ; ಒಬ್ಬಿಬ್ಬರ ಒಂದೆರಡು ಕವನಗಳು ಮಾತ್ರ ಓದಲರ್ಹ, ಸ್ಮರಣೀಯ.

	ಇದುವರೆಗೂ ವಿವರಿಸಿದ ಇಂಗ್ಲಿಷ್ ಛಂದಸ್ಸಿನ ವಿಧಾನ ಅನೇಕ ಪಂಡಿತವರ್ಯರ ಸಮ್ಮತಿಯನ್ನು ಪಡೆದು ರಸಿಕರಿಗೆ ಪರಿಚಿತವಾದ ವಿಧಾನ. ಇತರ ಮೂರು ನಾಲ್ಕು ವಿಧಾನಗಳನ್ನೂ ಸೂಚಿಸಿದ್ದಾರೆ, ಕೆಲವು ಆಳ್ತನದ ಅಭ್ಯಾಸಿಗಳು, ಒಬ್ಬನ ಅಭಿಪ್ರಾಯದಂತೆ, ಇಂಗ್ಲಿಷ್ ಪದ್ಯಕಾವ್ಯಕ್ಕೂ ಸಂಗೀತಕ್ಕೂ ಏನೂ ವ್ಯತ್ಯಾಸವಿಲ್ಲ; ತಾಳಬದ್ಧವಾದ ಸಂಗೀತದ ಸ್ವರವಿನ್ಯಾಸವನ್ನು ನಿರೂಪಿಸುವ ಸಂಕೇತ ಚಿಹ್ನೆಗಳನ್ನೇ ಉಪಯೋಗಿಸಬಹುದು, ಪದ್ಯಪಂಕ್ತಿಗಳ ನಡೆಯನ್ನು ನಿರೂಪಿಸುವುದಕ್ಕೂ ಇದನ್ನು ಅನುಮೋದಿಸುವವರು ಅತ್ಯಲ್ಪ ಮಂದಿ. ಇಷ್ಟು ದೂರ ಹೋಗದೆ, ಇನ್ನು ಕೆಲವರು ಇಂಗ್ಲಿಷ್ ಪದ್ಯವೂ ಗ್ರೀಕ್ ಲ್ಯಾಟಿನ್ ಪದ್ಯಗಳಂತೆ ಉಚ್ಚಾರಾಂಶದ ಕಾಲದ ಕ್ವಾಂಟಿಟಿ ಮೇಲೆಯೇ ರಚಿತವಾಗಿದೆ ಎಂದು ಸಾರಿದ್ದಾರೆ. ಒಂದು ಸ್ವರಭಾರದಿಂದ ಇನ್ನೊಂದಕ್ಕೆ ಮಧ್ಯೆ ಸವೆಯುವ ಹೊತ್ತು ಸಮಾನವಾಗಿರುತ್ತದೆ, ಆಯಾ ಛಂದಸ್ಸಿನ ಧಾಟಿಗೆ ಅನುರೂಪವಾಗಿ. ಈ ತತ್ತ್ವಕ್ಕೂ ಹೆಚ್ಚು ಮನ್ನಣೆಯಿಲ್ಲ. ಮತ್ತೊಬ್ಬ ಶ್ರದ್ಧಾಳು ಹೇಳಿರುವಂತೆ ಇಂಗ್ಲಿಷ್ ಪದ್ಯದ ಲಯವೆಲ್ಲ ಅವರೋಹಣ ಗತಿಯ ಟ್ರೋಕಿಕ್ ಲಯ : ಮೊದಲ ಒಂದು ಉಚ್ಚಾರಾಂಶವನ್ನು ಪ್ರತ್ಯೇಕಿಸಿ, ಪಠನಕ್ಕೆ ಮುನ್ನ ತೆಗೆದುಕೊಳ್ಳವ ಉಸಿರಿನಂತೆ ಅದನ್ನು ಭಾವಿಸಿಕೊಂಡು, ಅದಕ್ಕೆ ಬೆಲೆಕೊಡದೆ ನಿರ್ಲಕ್ಷಿಸತಕ್ಕದ್ದು. ಈ ರೀತಿ ಚಿತ್ತ ಬಂದಂತೆ ಕವಿಕೃತಿಯನ್ನು ವಿಭಾಗಮಾಡುತ್ತ ಹೋಗಬಹುದಾದರೆ ಯಾವ ಕ್ರಮವನ್ನು ಬೇಕಾದರೂ ನಾವು ಕಾಣಬಹುದು.

	ಇನ್ನು ಗದ್ಯ ಸಾಹಿತ್ಯದ ಛಂದಸ್ಸನ್ನು ನೋಡೋಣ. ಗದ್ಯವೂ ಲಯದಿಂದ ರಕ್ಷಿತವಾಗಿದೆಯೆಂದೂ ಆ ಲಯಸೂಕ್ಷ್ಮವೂ ಸಂಕೀರ್ಣವೂ ಆದದ್ದರಿಂದ ಅದನ್ನು ಲಾಲಿಸುವುದಕ್ಕೆ ಒಳಗಿವಿಯನ್ನು ತೆರೆಯಬೇಕೆಂದೂ ಕೆಲವು ಮೇಧಾವಿಗಳ ದೃಢ ನಿಶ್ಚಯ. ಪಾಶ್ಚಾತ್ಯ ವಿಮರ್ಶೆಪಿತನೂ ಶಿಖಾಮಣಿಯೂ ಆದ ಅರಿಸ್ಟಾಟಲ್ ಈ ಸೂತ್ರವನ್ನು ಹಿಂದೆಯೇ ಉದ್ಘೋಷಿಸಿದ: ಗದ್ಯ ಲಯಶೂನ್ಯವಾಗಿರಬಾರದು. ಛಂದೋಬದ್ಧವಾಗಿರಬಾರದು (ಂಡಿಡಿhಥಿಣhmoಟಿ, Immeಣಡಿoಟಿ). ಇಂಗ್ಲಿಷ್ ಗದ್ಯದ ಛಂದೋವಿಧಾನ ಪದ್ಯದ ಛಂದಸ್ಸಿಗಿಂತ ಶಿಥಿಲವಾದದ್ದು. ಹೆಚ್ಚು ಅನಿರ್ಬಂಧವಾದದ್ದು. ಕವನದಂತೆ ಪದವನ್ನು ಒಡೆದು ಉಚ್ಚಾರಾಂಶಗಳನ್ನು ಬೇರ್ಪಡಿಸುವಂತಿಲ್ಲವಾದರೂ ಪ್ರತಿ ಪದವನ್ನೂ ಒಟ್ಟಿಗೇ ತೆಗೆದುಕೊಂಡು ಉದಾರ ಬಗೆಯ ಗಣಗಳನ್ನು ಮಾಡಬೇಕು. ಪದ್ಯದಲ್ಲಿ ಅಪೂರ್ವವಾದ ಮೂರು ಉಚ್ಚಾರಾಂಶಗಳ ಗಣ, ಆಂಫಿಬ್ರಾಕ್ ಗದ್ಯದಲ್ಲಿ ವಿಶೇಷವಾಗಿ ಬರುತ್ತದೆ. ಪದ್ಯದಲ್ಲಿ ಪ್ರಾಯಶಃ ಇಲ್ಲವೇ ಇಲ್ಲದ ನಾಲ್ಕು ಅಂಶಗಳ ಗಣಗಳು, ಪಿಯನ್, ಎಪಿಟ್ರೈಟ್, ಗದ್ಯದಲ್ಲಿ ಸರ್ವ ಸಾಮಾನ್ಯ. ಐದು ಅಂಶಗಳ ಡಾಕ್ಮಿಯಕ್ ಕೂಡ ಉಂಟು. ಗಣಕ್ಕೂ ಮಿಗಿಲಾಗಿ ಲಯದ ಕಂಪನ್ನು ಪಸರಿಸುವ ಒಂದು ವಿಶಿಷ್ಟ ಭಾವದ ಪದಗುಚ್ಛ ಗದ್ಯಕ್ಕೆ ಮೀಸಲು. ಪ್ರಾಚೀನ ಗ್ರೀಕ್ ಗದ್ಯದಲ್ಲಿ ಅದು ಕಾಣಬರುತ್ತಿತ್ತು; ಪ್ರಾಚೀನ ಲ್ಯಾಟಿನ್ ಗದ್ಯದಲ್ಲಿ ಅದಕ್ಕೆ ಅಧಿಕ ಶೋಭೆ ಬಂತು, ಅಧಿಕ ಗೌರವವೂ ಬಂತು. ಅದಕ್ಕೆ ಕುರ್ಸಸ್ (ಅuಡಿsus = ಚಿ ಡಿuಟಿ) ಎಂದು ಹೆಸರು. ಕುರ್ಸಸ್ ಉದ್ದಕ ಉಚ್ಚಾರಾಂಶ ಅಥವಾ ಗುರುವಿನಿಂದ ಪ್ರಾರಂಭವಾಗಬೇಕು. ಉದ್ದವಲ್ಲದ ಉಚ್ಚಾರಾಂಶ ಅಥವಾ ಲಘುವಿನಿಂದ ಕೊನೆಗೊಳ್ಳಬೇಕು. ರೋಮನ್ನರನ್ನು ಮುಗ್ಧಗೊಳಿಸುತ್ತಿದ್ದ ಕುರ್ಸಸ್‍ಗಳು ಮುಖ್ಯವಾಗಿ ಮೂರು : 1 ಕುರ್ಸಸ್ ಪ್ಲಾನಸ್ : - u u - u ಹಾಗೂ - u u - u u ಇಂಗ್ಲಿಷಿನಲ್ಲಿ ಉದಾಹರಣೆ : ವಾಚ್Š - ಇ‰ಂಗ್ ಅಂ‰ಡ್ ವೇŠಟ್ - ಇಂ‰ಗ್. ಸಂಕೇತಚಿಹ್ನೆ ಸಂಕ್ಷಿಪ್ತವಾಗಿ ಹೀಗೆ : 5-2, 6-2; ಕೊನೆಯಿಂದ ಇದನ್ನು ಓದಬೇಕು; ಇದರರ್ಥ ಎರಡನೆಯ ಉಚ್ಚಾರಾಂಶ ಗುರು, ಹಾಗೂ ಐದನೆಯದೂ ಆರನೆಯದೂ ಗುರು; ಮಿಕ್ಕ ಅಂಶಗಳು ಲಘು. 2 ಕುರ್ಸಸ್ ಟಾರ್ಡಸ್ : - u u - u u ಹಾಗೂ - u u u - u u ಇಂಗ್ಲಿಷ್ ಉದಾಹರಣೆ :ವಿŠಜû‰ನ್ ಆಫ್‰ ಮೆಮ್Š-ಅ‰-ರಿ (6-3); sಸೀŠ-ಕ್ರೆಟ್ಸ್‰ ಆಫ್‰ ಫಿ‰-ಲಾŠ-ಸ‰-ಫಿ‰ (7-3). 3 “ಕುರ್ಸಸ್ ವಿಲಾಕ್ಸ್ : - u u - u - u (7-4-2); ಹಾಗೂ - u u u - u - u (8-4-2). ಇಂಗ್ಲಿಷ್ ಉದಾಹರಣೆ : ಸೂŠಟ್-ಅ‰-ಬ‰ಲ್ ಕ್ರಿŠಸ್-ಮ‰ಸ್ ಪ್ರೆŠ-ಸೆಂ‰ಟ್ಸ್; ಬ್ರೋŠಕ್ ಇ‰ನ್-ಟು‰ ಅ‰ ಥೌŠ - ಸಂ‰ಡ್ ಪೀŠ-ಸಸ್‰.

	ಇಂಗ್ಲಿಷ್ ಗದ್ಯದಲ್ಲಿ ಇವನ್ನು ಹೆಕ್ಕಿ ತೆಗೆಯಬಹುದು : ಮತ್ತು ದೇಶೀಯ ಕುರ್ಸಸಗಳನ್ನೂ (ನೇಟಿವ್ ಕ್ಯಾಡೆನ್ಸ್) ನೋಡಬಹುದು. ಅವುಗಳಲ್ಲಿ ಶಬ್ದಗುಚ್ಚ ಒತ್ತುಳ್ಳ ಉಚ್ಚಾರಾಂಶದಿಂದ ಆರಂಭವಾಗಿ ಒತ್ತುಳ್ಳ ಉಚ್ಚಾರಾಂಶದಿಂದಲೇ ಕೊನೆಗೊಳ್ಳಬಹುದು : ಲ್ಯಾ†ಂಡ್-ಇ‰ಂಗ್ ಆ‰ನ್ ದ‰ ರಾಕ್ಸ್† (5-1); ಕೋಲ್ಡ್ ಅಂ‰ಡ್ ಸೈ† ಲೆ‰ಂಟ್ ಹಿ†ಲ್ (6-3-1). ಗದ್ಯ ಛಂದಸ್ಸಿನ ಸಂಶೋಧನೆಯೂ ವಿಮರ್ಶೆಯೂ ಇನ್ನೂ ಹೆಚ್ಚು ಹೆಚ್ಚಾಗಿ ನಡೆಯಬೇಕಾಗಿದೆ. 		 	 
(ಎಸ್.ವಿ.ಆರ್.)
								(ಪರಿಷ್ಕರಣೆ: ಪ್ರೊ. ಎಲ್.ಎಸ್.ಶೇಷಗಿರಿರಾವ್)